ಈ ಚಿತ್ರರಂಗ ಎನ್ನುವುವೇ ಹಾಗೆ ಎಲ್ಲೋ ಹುಟ್ಟಿ ಎಲ್ಲೋ ಬೆಳೆದಿದ್ದರೂ ಕೂಡ ಕಲಾವಿದರಾಗಿ ಬಣ್ಣ ಹಚ್ಚಿದ ಮೇಲೆ ರಕ್ತ ಸಂಭಂದಿಯಂತೆ ಆಪ್ತರಾಗುತ್ತಾರೆ. ಆದರೆ ಎಷ್ಟು ಜನ ಹೀಗೆ ಇದ್ದಾರೆ ಹೇಳಿ? ಕೆಲವು ಸಿನಿಮಾ ವಿಚಾರಗಳಿಂದ ಮನಸಲ್ಲೇ ಕತ್ತಿ ಮಸಿಯುತ್ತಿರುತ್ತಾರೆ. ಇನ್ನೂ ಕೆಲವರಂತು ಒಂದೇ ಚಿತ್ರರಂಗದಲ್ಲಿದ್ದರು ದಾಯಾದಿಗಳಂತೆ ಸ್ಟಾರ್ ವಾರ್ ನಡೆಸುತ್ತಿರುತ್ತಾರೆ. ಈ ಸ್ಟಾರ್ ವಾರ್ ನಡೆಯುವುದೇ ಅಭಿಮಾನಿಗಳಿಂದ ತಮ್ಮ ನೆಚ್ಚಿನ ನಟನ ಸಿನಿಮಾ ಗೆಲ್ಲಬೇಕು ಎಂದು ಮತ್ತೊಬ್ಬ ಸ್ಟಾರ್ ನಟನ ಬಗ್ಗೆ ಇಲ್ಲಸಲ್ಲದ ಸುದ್ಧಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅವರ ಕಾಲು ಎಳೆಯುವ ಕೆಲಸವನ್ನು ಮಾಡುತ್ತಿರುತ್ತಾರೆ. ಆದರೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮಾತ್ರ ಯಸತ ತಂಟೆಗೂ ಹೋಗದೆ ಎಲ್ಲರಲ್ಲೂ ಒಳ್ಳೆಯ ಭಾವನೆಯನ್ನು ಮೂಡಿಸಿದ್ದಾರೆ.
ಸದ್ಯ ಕನ್ನಡ ಚಿತ್ರರಂಗದಲ್ಲಿ ನಟ ನಿರ್ದೇಶಕ ಹಾಗೂ ನಿರ್ಮಾಕರಾಗಿ ತಮ್ಮನ್ನು ತಾವು ಸ್ಥಾಪಿಸಿ ಕೊಂಡವರು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು. ತಮ್ಮ ವಿಭಿನ್ನ ಸ್ಕ್ರೀನ್ ಪ್ಲೇ ಹಾಗೂ ನಟನೆಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿರುವ ಅವರು ನಮ್ ಏರಿಯಲ್ ಒಂದ್ ದಿನ ಎಂಬುವ ಚಿತ್ರದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಚಿತ್ರದ ಮುಖಾಂತರ ಸಿಂಪಲ್ ಸ್ಟಾರ್ ಆಗಿ ಹೊರಹುಮ್ಮಿದ್ದಾರೆ. ತದ ನಂತರ 2014 ರಲ್ಲಿ ಉಳಿದವರು ಕಂಡಂತೆ ಎಂಬುವ ವಿಶೇಷ ಚಿತ್ರವನ್ನು ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತಾನೂ ಒಬ್ಬ ಉತ್ತಮ ನಿರ್ದೇಶಕನೆಂದು ಸಾಭೀತು ಪಡಿಸಿದ್ದಾರೆ. ಹೀಗೆ ಸಾಲುಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ಬರುತ್ತಿದ್ದ ಸಿಂಪಲ್ ಸ್ಟಾರ್ 2016 ರಲ್ಲಿ ಕಿರಿಕ್ ಪಾರ್ಟಿ ಎಂಬುವ ಚಿತ್ರವನ್ನು ಬರೆದು ಅಭಿನಯಿಸಿದರು.
ಹೌದು ಈ ಸಿನಿಮಾ ರಾಜ್ಯಾದ್ಯಾಂತ 15 ಚಿತ್ರಮಂದಿರಗಳಲ್ಲಿ 250 ದಿನಗಳು ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ 365 ದಿನಗಳನ್ನು ಪೂರೈಸುವ ಮುಖಾಂತರ ಚಿತ್ರತಂಡಕ್ಕೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತು.
ಸದ್ಯ ನಟ ರಕ್ಷಿತ್ ಶೆಟ್ಟಿಯವರು 777 ಚಾರ್ಲಿ ಯಶಸ್ಸು ಕಂಡ ಖುಷಿಯಲ್ಲಿದ್ದು ಸದ್ಯಕ್ಕೆ ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ. ಅಂದಹಾಗೆ ರಕ್ಷಿತ್ ರವರ ಸ್ವಭಾವದ ಬಗ್ಗೆ ನಟ Pramod Shetty ಕೆಲವು ವಿಚಾರಗಳನ್ನು ಬಿಚ್ಚಿಟ್ಟಿದ್ದು ಅವರು ಹೇಳಿರುವ ಮಾತುಗಳನ್ನು ಕೇಳಿದರೆ ರಕ್ಷಿತ್ ಶೆಟ್ಟಿ ಯವರು ನಿಜಕ್ಕೂ ಹೀಗೆನಾ ಎಂದೆನಿಸುತ್ತದೆ. ನಟ ಪ್ರಮೋದ್ ಶೆಟ್ಟಿ ರಕ್ಷಿತ್ ಶೆಟ್ಟಿ ಬಗ್ಗೆ ಹೇಳಿದ್ದೇನು ನೋಡೋಣ ಬನ್ನಿ.
ಹೌದು ಇತ್ತೀಚೆಗಷ್ಟೇ ಖಾಸಗಿ ಸಂದರ್ಶನವೊಂದರಲ್ಲಿ ನಟ ಪ್ರಮೋದ್ ಶೆಟ್ಟಿಯ ನಟ ರಕ್ಷಿತ್ ಶೆಟ್ಟಿಯವರ ಬಗ್ಗೆ ಮಾತನಾಡಿದ್ದು ಸಾಕಷ್ಟು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ನನ್ನ ಹಾಗೂ ಅವನ ಒಡನಾಟ ಸ್ನೇಹಕ್ಕೂ ಮೀರಿದ್ದು ಬಾಂಧವ್ಯಕ್ಕೂ ಮೀರಿದ್ದು ಎಂಸಿರುವ ಪ್ರಮೋದ್ ರಕ್ಷಿತ್ ಶೆಟ್ಟಿ ಹೇಗೆ ಅಂದ್ರ ಹೇಳಬಹುದೇನೋ ಅವನು ನನ್ನ ಜೊತೆಗೆ ಹೇಗೆ ಅಂತ ಕೇಳಿದ್ರೆ ಹೇಳುವುದು ಕಷ್ಟ ಆಗುತ್ತದೆ. ನನಗಲ್ಲದ ಜವಾಬ್ದಾರಿಯನ್ನು ನನಗೆ ಕೊಟ್ಟು ನನ್ನ ಯೋಗ್ಯತೆಯನ್ನು ನನಗೆ ತಿಳಿಸಿಕೊಟ್ಟವನು. ಅವನು ನಿಜಕ್ಕೂ ಮುಗ್ಧ. ಚಾರ್ಲಿ ಸಿನಿಮಾದಲ್ಲಿ ಆ ಶ್ವಾನವನ್ನು ಏನು ನೋಡ್ತಾ ಇದ್ದೇವೆ. ಆ ಶ್ವಾನಕ್ಕಿಂತಲೂ ಕೂಡ ಹೆಚ್ಚು ಮುಗ್ಧತೆಯನ್ನು ಹೊಂದಿದ್ದವನು ಅವನು. ಅವನಿಗೆ ಯಾವುದೇ ರಾಜಕಾರಣ ಗೊತ್ತಿಲ್ಲ ಎಂದಿದ್ದಾರೆ.
ಇನ್ನು ರಕ್ಷಿತ್ ಶೆಟ್ಟಿ ಬೇರೆಯವರಿಗೆ ಕೆಟ್ಟದಾಗಲಿ ಎಂದು ಬಯಸಿದ್ದನ್ನು ನಾನು ಕಳೆದ ಹತ್ತು ವರ್ಷದಲ್ಲಿ ಫ್ರೆಂಡ್ಶಿಪ್ ನಲ್ಲಿ ನೋಡಿಯೇ ಇಲ್ಲ. ಶಾಪ ಹಾಕೋದು ಬಿಟ್ಟಾಕಿ ಅದು ದೊಡ್ಡ ಮಾತಾಗಿದ್ದು ಮಾತಲ್ಲಿ ಕೂಡ ನೋಡೇ ಇಲ್ಲ. ಮಾತಲ್ಲಿ ಕೂಡ ಅವನು ಬೇರೆಯವರಿಗೆ ಕೆಟ್ಟದಾಗಬೇಕು ಹಾಗೂ ಅವರು ನನ್ನ ಜೊತೆಗೆ ಸರಿಯಿಲ್ಲ ಅವರಿಗೆ ಬೈಬೇಕು ಹೊಡಿಬೇಕು ಈ ರೀತಿಯ ಮಾತುಗಳನ್ನು ಕೇಳಿಲ್ಲ ಅವನು ಒಬ್ಬ ಮುಗ್ಧ ಮನಸ್ಸಿನ ಮನುಷ್ಯನಾಗಿದ್ದು ಅವನನ್ನು ನೋಡಿದರೆ ಹಾಗೆ ಅನಿಸಲ್ಲ.
ಜಾಸ್ತಿ ಯಾರಿಗೂ ರಿಯಾಕ್ಟ್ ಮಾಡಲ್ಲ. ಹೌದು ಆದರೆ ಅವನು ಓಪನ್ ಅಪ್ ಆದರೆ ಅವನಷ್ಟು ಎಂಜಾಯ್ ಮಾಡುವವನು. ತರ್ಲೆ ಮಾಡುವವನು. ನಾವೇನಾದರು ಹೇಳಿದರೆ ಅದಕ್ಕೆ ಉತ್ತರ ಅವನ ಹತ್ರ ಇರುತ್ತೆ . ಇತ್ತೀಚೆಗೆ ಬುಕ್ ಗಳನ್ನು ಓದಿದ್ದು ಅವನು ಅವನನ್ನು ಕೂಲ್ ಆಗಿ ಇಟ್ಟುಕೊಳ್ತಾನೆ. ಅವನ ಉದ್ದೇಶ ಒಂದೇ ಸುಮಾರು ಸ್ಕ್ರಿಪ್ಟ್ ಗಳನ್ನು ಬರಿಯ ಬೇಕು ಸಿನಿಮಾ ಮಾಡ್ಬೇಕು ಅನ್ನೋದು ಮಾತ್ರ. ಸಿನಿಮಾ ಬಿಟ್ಟು ಬೇರೇನೂ ಗೊತ್ತೇ ಇಲ್ಲ ಎಂದಿದ್ದಾರೆ ಪ್ರಮೋದ್ ಶೆಟ್ಟಿ.