ವಾರ್ತಾ ಮಂಜರಿ
Trending Stories, Viral News, Gossips & Everything in Kannada

HR Ranganath: ಅದ್ಭುತವಾಗಿ ಲಕ್ಷ್ಮಿ ಬಾರಮ್ಮ ಹಾಡು ಹಾಡಿದ ಪಬ್ಲಿಕ್ ಟಿವಿ ರಂಗಣ್ಣ …ವಿಡಿಯೋ ವೈರಲ್

59

ಪ್ರತಿ ರಾತ್ರಿ 9 ಗಂಟೆಯಾದರೆ ಸಾಕು ಬಹುತೇಕರು ದೂರದರ್ಶನದ ಮುಂದೆ ಕುಳಿತು ನೋಡುವ ಒಂದೇ ಒಂದು ಸುದ್ದಿ ವಾಹಿನಿ ಅಂದರೆ ಅದು ಪಬ್ಲಿಕ್ ಟಿವಿ. ಹೌದು ಈ ಸಮಯದಲ್ಲಿ HR Ranganath ರವರು ಬಿಗ್ ಬುಲೆಟಿನ್ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದು ರಂಗನಾಥ್ ರವರ ಮಾತುಕತೆ ಮತ್ತು ಸುದ್ದಿಯನ್ನು ಹೇಳುವ ಪರಿಯನ್ನು ನೋಡಲೆಂದೇ ಪ್ರೇಕ್ಷಕರು ಕಾದು ಕುಳಿತಿರುತ್ತಾರೆ. ಅಲ್ಲದೇ ಸರದಿಯಾದ ವರದಿಯನ್ನು ಕೂಡ ಹೇಳುವುದು ಕೇವಲ ರಂಗನಾಥ್ರವರು ಮಾತ್ರ ಎಂಬುವಂತಹ ಮಾತು ಸಜ ಪ್ರೇಕ್ಷಕರ ವಲಯದಲ್ಲಿರುವುದು ವಿಶೇಷ.

ಇದರ ಮಧ್ಯೆ ರಂಗನಾಥ್ ರವರು ಆಲ್ ರೈಟ್ ಎಂಬುವಂತಹ ಪದ ಅದೇಕೋ ಏನೋ ಪ್ರೇಕ್ಷಕರಿಗೆ ಒಂದು ರೀತಿ ಮಜಾ ನೀಡುತ್ತದೆ ಎನ್ನಬಹುದು. ರಾಮಕೃಷ್ಣಯ್ಯ ಮತ್ತು ಲೀಲಾ.ರಂಗಣ್ಣ ದಂಪತಿಗಳಿಗೆ ಜನಿಸಿದ ರಂಗನಾಥ್ ರವರಿಗೆ ಕಾತ್ಯಾಯಿನಿ ಮಣಿಕರ್ಣಿಕ ಸರ್ವಮಂಗಳ ಹಾಗೂ ವೈದೇಹಿ ಹೆಸರಿನ ನಾಲ್ವರು ಸಹೋದರಿಯರು ವೆಂಕಟೇಶ್ ಮತ್ತು ಕೇಶವ ಎಂಬ ಇಬ್ಬರು ಸಹೋದರರು ಕೂಡ ಇದ್ದಾರೆ.

ಶಾರದ ಎಂಬುವವರನ್ನು ವಿವಾಹವಾಗಿರುವ ರಂಗನಾಥ್ ರವರಿಗೆ ವೈಸ್ವಿನಿ ಎಂಬ ಮಗಳಿದ್ದು ಇತ್ತೀಚೆಗಷ್ಟೇ ಮದುವೆ ಕೂಧ ಮಾಡಿದರು. ಮೊದಮೊದಲು ಕನ್ನಡ ಪ್ರಭ ನ್ಯೂಸ್ ಪೇಪರ್ ನಲ್ಲಿ ಜರ್ನಲಿಸ್ಟ್ ಆಗಿ ಕೆಲಸ ಪ್ರಾರಂಭಿಸಿದ ರಂಗನಾಥ್ ನೇರನುಡಿ ಮಾತನಾಡುವ ಶೈಲಿ ಮತ್ತು ಸತ್ಯವನ್ನು ಇದ್ದಹಾಗೆ ಹೇಳುವ ಇವರ ಮಾತಿನ ಧಾಟಿಗೆ ಬಹುದೊಡ್ಡ ಅಭಿಮಾನಿ ಬಳಗವಿದೆ.

ಇನ್ನು ಪ್ರಸ್ತುತ ಇರುವ ಸುದ್ದಿ ವಾಹಿನಿಗಳಲ್ಲಿ ಜನತೆಗೆ ಸರಿಯಾದ ಮಾಹಿತಿಗಳನ್ನು ನೀಡುತ್ತಿರುವ ವಾಹಿನಿಯಲ್ಲಿ ಪಬ್ಲಿಕ್ ಟಿವಿ ಮುಖ್ಯವಾದದ್ದು ಎಂಬ ಮಾತು ಕೂಡ ಇದ್ದುವ ಇನ್ನು ಹೆಚ್.ಆರ್.ರಂಗನಾಥ್ ರವರು ಪಬ್ಲಿಕ್ ಟಿವಿಯನ್ನು ಆರಂಭ ಮಾಡಿದ್ದೆ ಒಂದು ರೋಚಕ ಕಥೆಯಾಗಿದ್ದು ಮೂಲತಃ ಮೈಸೂರಿನವರಾದ ಅವರು ಮಾಧ್ಯಮದಲ್ಲಿ ಕೆಲಸ ಮಾಡುವ ಆಸಕ್ತಿಯಿಂದ ಬೆಂಗಳೂರಿಗೆ ಬಂದರು.

lakhsmi baramma ranganna singing

ಮೊದಲು ಹಲವಾರು ದೈನಂದಿನ ಪತ್ರಿಕೆಗಳಿಗೆ ವರದಿಗಾರನಾಗಿ ಚೀಫ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದು
ಸರಳತೆಗೆ ಹೆಸರಾಗಿರುವವರು ರಂಗನಾಥ್ ರವರ 2016 ರಲ್ಲಿ ಜೀಕನ್ನಡ ವಾಹಿನಿ ದಶಕದ ಜರ್ನಲಿಸ್ಟ್ ಎನ್ನುವ ಅವಾರ್ಡ್ ಕೂಡ ಪಡೆದುಕೊಂಡರು. ಹೌದು ಕಷ್ಟ ಪಟ್ಟು ಪಬ್ಲಿಕ್ ಟಿವಿಯನ್ನು ಕಟ್ಟಿ ಬೆಳಿಸಿದ್ದಾರೆ ರಂಗಣ್ಣ. ಅವರ ಈ ಅದ್ಭುತ ಸಾಧನೆ ಅದೆಷ್ಟೋ ಯುವಕರಿಗೆ ಸ್ಫೂರ್ತಿ ಎಂದೇ ಹೇಳಬಹುದಾಗಿದೆ.

ಕೊರೋನಾ ಸಂದರ್ಭದಲ್ಲಿ ಭಾರತೀಯ ಮಾಧ್ಯಮಗಳು ಬಹಳ ಎಚ್ಚರಿಕೆಯಿಂದ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದ್ದು ನನ್ನ ಪ್ರಕಾರ ಮಾಧ್ಯಮಗಳು ಪ್ರಭಾವಶಾಲಿಯಾಗಿ ಕರ್ತವ್ಯ ನಿರ್ವಹಿಸಿದ್ದು ಮಾಧ್ಯಮಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಲೇ ಸಮಾಜಕ್ಕೆ ಪ್ರೇರಣೆಯಾಗಿ ನಿಂತಿದ್ದವು. ಕೋವಿಡ್-೧೯ ನಿವಾರಣೆ ಸಮುದಾಯದ ಸಹಭಾಗಿತ್ವದಲ್ಲಿ ಗೆಲ್ಲಲೆಬೇಕಾದ ಯುದ್ಧವಾಗಿದ್ದು ಸರ್ವಕಾಲದಲ್ಲೂ ಮಾಧ್ಯಮ ತನ್ನ ಸಾಮಾಜಿಕ ಜವಾಬ್ದಾರಿಯನ್ನು ತಾನು ನಿರ್ವಹಿಸಲೇಬೇಕು ಎಂದು ರಂಗನಾಥ್ ರವರು ಹೇಳಿಕೆ ನೀಡಿದ್ದು
ಈ ಮಾತಿಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿತ್ತು.

ಸದ್ಯ ಇತ್ತೀಚಿನ ದಿನಗಳಲ್ಲಿ ರಂಗಣ್ಣ ರವರನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಟ್ರೋಲ್ ಮಾಡಲಾಗುತ್ತಿದ್ದು ಯುವ ಪೀಳಿಗೆ ಗಳಂತೂ ರಂಗಣ್ಣನವರು ಮಾತನಾಡುವ ಕೆಲವು ಸಂಭಾಷಣೆಗಳನ್ನು ಎಡಿಟ್ ಮಾಡಿ ತಮ್ಮದೇ ಆದ ಶೈಲಿಯಲ್ಲಿ ವಿಡಿಯೋ ಮಾಡುತ್ತಿದ್ದಾರೆ. ಆದರೆ ಯಾವುದಕ್ಕೂ ಕೂಡಾ ತಲೆಕೆಡಿಸಿಕೊಳ್ಳದ ರಂಗಣ್ಣನವರು ತಮ್ಮ ಮಾತಿನಿಂದ ರಾಜಕೀಯ ನಾಯಕರ ಬೆವರಿಳಿಸುತ್ತಿದ್ದಾರೆ. ಇನ್ನು ರಂಗಣ್ಣನವರ ಆಲ್ ರೈಟ್ ಎಂಬುವಂತಹ ಸಂಭಾಷಣೆ ಯಾವ ಮಟ್ಟಕ್ಕೆ ಖ್ಯಾತಿ ಪಡೆದಿದೆ ಎಂಬುದು ತಮಗೆ ತಿಳಿದಿದೆ.

ಸದ್ಯ ಇದೀಗ ಒಂದು ಅಪರೂಪದ ಘಟನೆ ನಡೆದಿದ್ದು ನಿಜಕ್ಕೂ ರಂಗಣ್ಣ ಪ್ರತಿಯೊಬ್ಬರು ಅಚ್ಚದಿ ಪಟ್ಟಿದ್ದಾರೆ. ನಮ್ಮ ರಂಗಣ್ಣ ವರದಿ ಹಾಗೂ ಮಾತಿನಿ ಚಾಣಿ ಬೀಸಿ ಬೆವರಿಸುವುದನ್ನು ತಾವು ನೋಡಿರುತ್ತೀರಿ. ಆದರೆ ರಂಗಣ್ಣ ಗಾಯನ ಮಾಡುವುದನ್ನು ಕೇಳಿದ್ದೀರ? ಈ ಘಟನೆ ಪಬ್ಲಿಕ್‌ ಟಿವಿಯ ಎಂಟನೆ ವರುಷದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ನಡೆದಿದ್ದು ಬಾಗ್ಯದ ಲಕ್ಷ್ಮಿ ಬಾರಮ್ಮ ಹಾಡನ್ನ ಎಷ್ಟು ಸೊಗಸಾಗಿ ಹಾಡಿದ್ದಾರೆ ನೀವೆ ನೋಡಿ.